Tuesday, January 8, 2013

ರೈತ - ಅನ್ನದಾತ

[ ಇದು ನನ್ನ ೨ನೇ  ಕನ್ನಡದ ಕವಿತೆ.ರೈತ ದೇಶದ ಬೆನ್ನೆಲುಬು ಎಂಬುದನ್ನು ಇದರಲ್ಲಿ ಸಾರಲು ಪ್ರಯತ್ನಿಸಿದ್ದೇನೆ.ಇಂದಿನ ಸಮಾಜ  ರೈತನ ಕೊಡುಗೆ ಮತ್ತು ಪ್ರಾಮುಖ್ಯತೆಯನ್ನು 
ಕಡೆಗಣಿ ಸುತ್ತಿರುವುದು ಅತ್ಯಂತ ಶೋಚನೀಯ.
ಪೂಜ್ಯ ಲಾಲ್ ಬಹದ್ದೂರ್ ಶಾಸ್ತ್ರಿಗಳು ನುಡಿದಂತೆ "ಜೈ ಜವಾನ್ , ಜೈ ಕಿಸಾನ್ " - ಬರಿ ಶಬ್ಧಗಳಾಗಿ ಉಳಿದಿವೆ ಅಷ್ಟೆ.ಈಚೆಗಿನ ದಿನಗಳ್ಳಲ್ಲಿ ರೈತರ ಸಮಸ್ಯೆ ಗಳನ್ನು ಕೇಳುವವರೇ ಇಲ್ಲದಂತಾಗಿದೆ.ನಾವೆಲ್ಲರೂ ರೈತರ ನಿಸ್ವಾರ್ಥ ಸೇವೆ,ದುಡಿಮೆಯ ಮೇಲೆ ಅವಲಂಬಿತರಾಗಿದ್ದೇವೆ ಎಂಬುದನ್ನು ಮರೆಯದೆ ಅವನನ್ನು ಬೆಂಬಲಿಸಿ ಸಹಕರಿಸೋಣ ಎನ್ನುವುದೇ ನನ್ನ ಕೋರಿಕೆ.
http://en.wikipedia.org/wiki/Agriculture_in_India     ಸೌಜನ್ಯ:ವಿಕಿಪೀಡಿಯ
http://en.wikipedia.org/wiki/Farmers'_suicides_in_India    ಸೌಜನ್ಯ:ವಿಕಿಪೀಡಿಯ ]



ರೈತ - ಅನ್ನದಾತ 
ನಿದ್ದೆಯಿನ್ದೆದ್ದ  ಕೋಳಿ ಕೂಗಲು,
ಆಗಸದಲಿ ರವಿ ಮೂಡಿದನು.
ಅಷ್ಟರಲ್ಲೆ ನಮ್ಮ ರೈತ ಹೆಗಲ ಮೇಲೆ ನೇಗಿಲ್ಹೊತ್ತು 
ದನಗಳೊಡನೆ ಹೊಲದೆಡೆಗೆ  ನಡೆದನು. 

ಅವನ ಮೊಗದೊಳಿದ್ದ ಉತ್ತ್ಸಾಹ , ನಿಷ್ಠೆಯನ್
ಕಂಡು ಆದಿತ್ಯ ಚಕಿತನಾದನು.
ಇವನ ಛಲವ ನೋಡಿಬಿಡುವ ಎಂದು 
ತನ್ನ ಕಿರಣ ಪ್ರಖರಗೊಲಿಸಿದನು.

ಇದ ಲೆಕ್ಕಿಸದ ರೈತ ಎಂದಿನಂತೆ 
ಹೊಲವ ಊಳುತಿದ್ದನು.
ಬಿಸಿಲಿನ ತಾಪವ ತಡೆಯದ ದೇಹದಿ 
ಒಂದು ಹನಿ ಶ್ರಮದ ಗಂಗೆ ಇಳೆಯ ಮೇಲೆ ಬಿದ್ದಳು.

ಅದನ್ ಕಂಡ ಭೂಮಿತಾಯಿ 
ಇಂಥ ಮಗನ ಪಡೆದ ತಾನೇ ಧನ್ಯೆ ಎಂದಳು.
ಹೀಗೆ ನೀನು ಎಲ್ಲರಿಗೂ ಅನ್ನ ಕೊಡು ಮಗುವೆ 
ಎಂದು ತುಂಬು ಹೃದಯದಿ ಹರೆದಳು.
 
ಭೂದೇವಿಯ ನಂಬಿ ರೈತ
 ಹೊಲದಿ ಬೀಜ ಬಿತ್ತನು.
ಅವನ ನಂಬುಗೆಯನ್ ಹುಸಿಯನಾಗಿಸದ ಭೂತಾಯಿ 
ಬಂಗಾರವನ್ನೇ ಕೊಟ್ಟಳು.

ಚಿನ್ನದ ಬೆಳೆಯ ಪಡೆದ  ರೈತ 
ಮನದಿ ತಾಯಿಗೆ ನಮಿದನು.
ಹೀಗೆ ಎಂದೆಂದೂ ತನ್ನ ಕಾಯಕವ 
ಮರೆಯದ ರೈತ - ಅನ್ನದಾತನಾದನು.